ವಿಶ್ವದಾದ್ಯಂತ ತೆರೆಕಂಡು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿರುವ ಕಾಂತಾರ ಚಾಪ್ಟರ್-1 (Kantara Chapter 1) ಸಿನಿಮಾ ಬಾಕ್ಸಾಫೀಸ್‌ನಲ್ಲೂ ಬಹುಕೋಟಿ ಗಳಿಕೆ ಕಂಡಿದೆ. ಕಾಂತಾರ ಚಾಪ್ಟರ್-1 ಸಿನಿಮಾಗೆ ಪ್ರಪಂಚದಾದ್ಯಂತ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ದೀಪಾವಳಿ (Deepavali) ಹಬ್ಬಕ್ಕೆ ಮತ್ತೊಂದು ಹೊಸ ದಾಖಲೆ ಸೃಷ್ಟಿಸುತ್ತಿದೆ.
#KantaraChapter1 North America gross crossed $4.6M+ and counting… 💥
Running successfullyhttps://t.co/B3Cbs8LAjj 🎫
MUST WATCH IN THEATRES#Kantara NA by @PrathyangiraUS pic.twitter.com/zElIruANN8
— Prathyangira Cinemas (@PrathyangiraUS) October 20, 2025
ಕಾಂತಾರ ಸಿನಿಮಾ ಈಗಾಗಲೇ 18 ದಿನಗಳಲ್ಲಿ 765 ಕೋಟಿ ಕಬಳಿಸಿದೆ. ಇದೀಗ ದೀಪಾವಳಿ ಹಬ್ಬದ ರಜಾದಿನಗಳ ವಿಶೇಷವಾಗಿ ಕಾಂತಾರ ಸಿನಿಮಾ 800 ಕೋಟಿ ರೂ. ಗಡಿ ದಾಟಲಿದೆ. ಅಂದಹಾಗೆ ಕಾಂತಾರ ಸಿನಿಮಾದ ಗಳಿಕೆ ಮೂರನೇ ವಾರದಲ್ಲೂ ಕುಗ್ಗಿಲ್ಲ. ಅಲ್ಲದೇ 1000 ಕೋಟಿಯ ಟಾರ್ಗೆಟ್ ಮುಟ್ಟುವ ನಿರೀಕ್ಷೆ ಹೆಚ್ಚಾಗಿದೆ.
A monumental milestone at the Kerala Box Office! 💥#KantaraChapter1 roars past 55 CRORES+ gross in Kerala.
The divine cinematic saga continues to win hearts! ❤️🔥#KantaraInCinemasNow #BlockbusterKantara #DivineBlockbusterKantara #KantaraEverywhere#Kantara @hombalefilms… pic.twitter.com/jqyX6I72eG— Hombale Films (@hombalefilms) October 20, 2025
ಕಾಂತಾರ ಸಿನಿಮಾ ಒಂದೊಂದೇ ದಾಖಲೆಗಳನ್ನ ಪುಡಿಗಟ್ಟುತ್ತಾ, ತನ್ನದೇ ಹೊಸ ರೆಕಾರ್ಡ್ ಕ್ರಿಯೇಟ್ ಮಾಡುತ್ತಿದೆ. ಕೇರಳ, ಆಸ್ಟ್ರೇಲಿಯಾ, ಕರ್ನಾಟಕ ಹೀಗೆ ಸಿನಿಮಾ ಒಂದೊಂದೇ ದಾಖಲೆಗಳನ್ನ ನಿರ್ಮಿಸುತ್ತಿದೆ. ದೀಪಾವಳಿ ಹಬ್ಬದ ವೈಬ್‌ಗೆ ಕಾಂತಾರ ಗಳಿಕೆ ಮತ್ತಷ್ಟು ಹೆಚ್ಚಲಿದೆ. 800 ಕೋಟಿ ರೂ. ದಾಟುವ ಭರವಸೆ ಹೆಚ್ಚಾಗಿದೆ.



