ಕಾಂತಾರ ದೈವ ಬಲ ರಿಷಬ್ ಕೈ ಹಿಡಿದಿದೆ. ಹೊಂಬಾಳೆ ಬ್ಯಾನರ್ ನರಸಿಂಹ ಅವತಾರವನ್ನು ಇಡೀ ದೇಶಕ್ಕೆ ವಿಭಿನ್ನ ರೀತಿಯಲ್ಲಿ ತೊರಿಸಿದ ಮೇಲೆ ಇದೀಗ ದೈವ ದರ್ಶನವನ್ನ ಮಾಡಿಸ್ತಾ ಇದ್ದು ಕಾಂತಾರ ಗೆದ್ದು ಬೀಗಿದೆ. ಕಾಂತಾರ ಮೇನಿಯಾ ಇಡೀ ಇಂಡಿಯಾದಲ್ಲಿ ಜೊರಾಗಿದ್ದು ಹೊಸ ಹೊಸ ದಾಖಲೆಗೆ ನಾಂದಿಯಾಗಿದೆ.
ಕಾಂತಾರ ಚಾಪ್ಟರ್ 1 ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರೋ ಸಿನಿಮಾ ಇದುವರೆಗೂ 717 ಕೋಟಿ ಗೆದ್ದು ಬೀಗಿದ್ದು ಇನ್ನೇನು ಕೆಲವೇ ಕೆಲವು ದಿನಗಳಲ್ಲಿ 1000 ಕೋಟಿ ಗೆಲ್ಲೋ ಉತ್ಸಾಹದಲ್ಲಿದೆ. ಈ ಮೂಲಕ ಈ ವರ್ಷದ ಮೊದಲ ಸಾವಿರ ಕೋಟಿ ಗಳಿಸಿದ ಸರದಾರನಾಗಿ ರಿಷಬ್ ಡಿವೈನ್ ದಾಖಲೆ ಬರೆದಿದ್ದಾರೆ.
ದೈವರಾಧನೆಗೆ ಇಡೀ ಇಂಡಿಯಾ ಮಾರುಹೋಗಿದ್ದು ಕರ್ನಾಟಕದ ತುಳು ನಾಡಿನ ಸಂಸ್ಕೃತಿಗೆ ಕೈ ಎತ್ತಿ ಮುಗಿದಿದ್ದಾರೆ. ದಿನ ಕಳೆದಂತೆ ಕಾಂತಾರ ಅಬ್ಬರ ಜೋರಾಗ್ತಾ ಇದ್ದು ಇವತ್ತಿಗೂ ಥಿಯೆಟರ್ ಮುಂದೆ ಹೌಸ್ ಫುಲ್ ಬೋ ರ್ಡ್ ಬಿದ್ದಿದೆ. ಕಾಂತಾರದ ಮೂಲಕ ರಿಷಬ್ ಶೆಟ್ಟಿ ಐಎಂ ಡಿಬಿಯಲ್ಲಿಯು ಮೋಸ್ಟ ಪಾಪುಲರ್ ಆಕ್ಟರ್ ಆಗಿದ್ದು ಹಲವು ಮೊದಲುಗಳಿಗೆ ಸಾಕ್ಷಿಯಾಗಿದ್ಧಾರೆ.
ಕೆಜಿಎಫ್ ಕಾಲದಿಂದಲೇ ಪರ ಭಾಷಯ ಸಿನಿಮಾಗಳು ಕನ್ನಡ ಸಿನಿಮಾಗಳು ಅಂದ್ರೆ ಮೂಗು ಮುರಿಯೋ ಟ್ರೆಂಡ್ ಮುಗಿದು ಹೋಗಿದೆ. ಯಾವಾಗ ಕೆಜಿಎಫ್ 2 1300 ಕೋಟಿ ಗಳಿಸಿ ಗ್ಲೋಬಲ್ ಲೆವೆಲ್ ನಲ್ಲಿ ಯಶ್ ಮೆನಿಯ ಶುರು ವಾಯ್ಥೋ ಅದಕ್ಕೆ ತಕ್ಕಂತೆ ರಿಷಬ್ ಕಾಂತಾರ ಮೂಲಕ ಡಿವೈನ್ ಪವರ್ ನ ಕನ್ನಡ ಸಿನಿ ರಂಗಕ್ಕೆ ತುಂಬಿದ್ದರು 14 ಕೋಟಿ ಬಜೆಟ್ ನ ಕಾಂತಾರ 450 ಕೋಟಿ ಗೆದ್ದು ಬೀಗಿದ್ದಲ್ಲದೆ ಪ್ರೀಕ್ವೆಲ್ ಗಾಗಿ ಕಾದು ಕೂ ರುವಂತೆ ಮಾಡಿದ್ದು ಸುಳ್ಳಲ್ಲ.
ಇದೀಗ ಆ ಕಾಯುವಿಕೆ ಸಿನಿಮಾ ಮುಂದೆ ನಿಂತು ಪ್ರೇಕ್ಷಕರು ಟಿಕೆಟ್ ಸಿಗದೆ ಕಾಯುವಂತೆ ಮಾಡಿದೆ. ಸಿನಿಮಾ ಬಿಡುಗೆ ಆಗಿ 25 ದಿನಗಳಾಗ್ತಾ ಬಂದರೂ ಕಾಂತಾರ ನೋಡುವಿಕೆಯ ಉತ್ಸಾಹ ವೀಕ್ಷಕರಲ್ಲಿ ಕಡಿಮೆಯಾಗಿಲ್ಲ. ಇದೇ ಕಾರಣಕ್ಕೆ ಕನ್ನಡ ತಮಿಳು ತೆಲುಗು ಮಲೆಯಾಳಂ ಹಿಂದಿಯಲ್ಲಿ ಕಾಂತಾರ ಕಲೆಕ್ಷನ್ ಕಂಡು ಬಾಕ್ಸಾಫೀಸ್ ಸಿನಿ ಪಂಡಿತರು ಶಾಕ್ ಆಗಿ ದ್ಧಾರೆ.
ಕರ್ನಾಟಕದಲ್ಲಿ ಕಾಂತಾರ 200 ಕೋಟಿ ಗಳಿಸಿದ ಮೊದಲ ಸಿನಿಮಾ ಅನ್ನೋ ದಾಖಲೆ ಬರೆಯೋ ಜೊತೆಗೆ ರಿಷಬ್ ಶೆಟ್ಟಿ ಎರಡು ಬಾರಿ 400 ಕೋಟಿ ಕಲೆಕ್ಷನ್ ಮಾಡಿರೋ ನಟ ಅಂತ ಸುದ್ದಿ ಮಾಡಿದ್ಧಾಗಿದೆ. ಇದೀಗ ತಮಿಳು ಪ್ರೇಕ್ಷಕರು ಕೂಡ ಕಾಂತಾರವನ್ನು ಗೆಲ್ಲಿಸೋ ಮೂಲಕ ಈ ಹಿಂದಿನ ಸ್ಟಾರ್ ನಟರ ಸಿನಿಮಾಗಳನ್ನ ಮೀರಿ ಕಾಂತಾರ ಕಲೆಕ್ಷನ್ ಮಾಡಿದೆ.

ಕೆಜಿಎಫ್ ನಂತರ ಬಂದ ಪ್ಯಾನ್ ಇಂಡಿಯಾ ಸಿನಿಮಾಗಳು ತಮಿಳಿನಲ್ಲಿ ಹೆಸರು ಮಾಡೋದರಲ್ಲಿ ಬಾಕ್ಸಾಫೀಸಲ್ಲಿ ಗುಡುಗೋದರಲ್ಲಿ ವಿಫಲವಾದವು. ಕೆಜಿಎಫ್ 2 ತಮಿಳಿನ ಬಾಕ್ಸಾಫೀಸಲ್ಲಿ 100 ಕೋಟಿ ಕಲೆಕ್ಷನ್ ಮಾಡಿದ್ದು ಬಿಟ್ಟರೆ ಆನಂತರ ಬಂದ ಪುಷ್ಪ2 , ಆರ್ ಆರ್ ಆರ್, ಕಲ್ಕಿ ಸಿನಿಮಾಗಳು ಕೂಡ 100 ಕೋಟಿ ಗಳಿಸೋದು ಸಾಧ್ಯವಾಗಲಿಲ್ಲ. ಆದ್ರೆ ಈಗ ಮತ್ತೊಂದು ಕನ್ನಡ ಸಿನಿಮಾ ತಮಿಳು ಬಾಕ್ಸಾಫೀಸಲ್ಲಿ 100 ಕೋಟಿ ಗಳಿಸುವತ್ತ ಹೋಗ್ತಿದ್ದು ಅದು ಕಾಂತಾರ ಅನ್ನೋದು ಹೆಮ್ಮೆಯ ವಿಚಾರ.

ಅಕ್ಟೋಬರ್-2 ರಂದು ಚಿತ್ರ ರಿಲೀಸ್
ಹೌದು ಕಾಂತಾರ ಇದುವರೆಗು ತಮಿಳು ಬಾಕ್ಸಾಫೀಸಲ್ಲಿ 95 ಕೋಟಿ ಗಳಿಸಿದೆ. ಇನ್ನು ದೀಪಾವಳಿಯ ದಿನಗಳನ್ನ ನೋಡಿದ್ದರೆ ಆ ಸಮಯದಲ್ಲಿ 100 ಕೋಟಿ ರೀಚಾಗೋದು ಪಕ್ಕಾ ಅನ್ನೋ ಮಾಹಿತಿಯಿದೆ. ತಮಿಳು ಸಿನಿಮಾಗಳನ್ನ ಹೊರತು ಪಡಿಸಿ ಅಲ್ಲಿನ ಬಾಕ್ಶಾಫೀಸಲ್ಲಿ ಮತ್ತೊಂದು ಕನ್ನಡ ಸಿನಿಮಾ ಗೆದ್ದಿರೋದು ನಿಜಕ್ಕು ಹೆಮ್ಮೆಯ ವಿಚಾರವೇ ಅಲ್ಲವಾ?

ಅತ್ಯುತ್ತಮ ಕ್ಯಾಮರಾವರ್ಕ್
ಹಾಗಾದ್ರೆ ಕಾಂತಾರ ಚಾಪ್ಟರ್ 1 ಕ್ಕಿಂತ ಮುಂಚೆ ಬಂದ ಪ್ಯಾನ್ಇಂಡಿಯಾ ಸ್ಟಾರ್ ಗಳ ಸಿನಿಮಾ ಎಷ್ಟೆಲ್ಲ ಕಲೆಕ್ಷನ್ ನ ತಮಿಳು ಬಾಕ್ಸಾಫೀ ಸಲ್ಲಿ ಮಾಡಿತ್ತು ಅಂತ ನೊಡೋದಾದರೆ ಮೊದಲನೆಯದಾಗಿ ಕಳೆದ ವರ್ಷ ಬಿಡುಗಡೆ ಆದ ಪುಷ್ಪ 2 1800 ಕೋಟಿ ಕಲೆಕ್ಷನ್ ಮಾಡಿ ಎಲ್ಲ ಸಿನಿಮಾಗಳ ದಾಖಲೆ ಮುರಿದಿತ್ತು. ಬಾಲಿವುಡ್ ನಲ್ಲೇ 800 ಕೋಟಿ ಗಳಿಸಿದ ಪುಷ್ಪ 2 ತಮಿಳಿನಲ್ಲಿ ಸೋತಿತ್ತು. ಪುಷ್ಪನ ಅಬ್ಬ ರ ತಮಿಳು ನಾಡಿನಲ್ಲಿ ವರ್ಕ್ ಔಟ್ ಆಗಿರಲಿಲ್ಲ. ತಮಿಳು ಬಾಕ್ಸಾಫೀಸಲ್ಲಿ ಪುಷ್ಪ 2 ಸಿನಿಮಾಗಳಿಸಿದ್ದು 57.65 ಕೋಟಿಯನ್ನ ಅಂದ್ರೆ ನಂಬಲೇಬೇಕು.

ಪುಷ್ಪ ಕ್ರೇಜ್ ಕಡಿಮೇನೆ ಆಗಿಲ್ಲ ನೋಡಿ..
ಇನ್ನು ಪುಷ್ಪ 2 ಗಿಂತ ಮುಂಚೆ ಬಂದ ಜಕ್ಕಣ್ಣನ ಆರ್ ಆರ್ ಆರ್ ಮಲ್ಟಿಸ್ಟಾರ್ ಸಿನಿಮಾದಲ್ಲಿ ಜೂ ಎನ್ ಟಿ ಆರ್ ಹಾಗೆ ರಾಮ್ ಚರಣ್ ಇಬ್ಬರು ಇದ್ದರೂ ಕೂಡ ತಮಿಳು ನಾಡಿನಲ್ಲಿ ಇವರಿಬ್ಬರ ಹವಾ 100ಕೋಟಿಯು ತಲುಪಲಿಲ್ಲ ವಲ್ಡ್ ವೈಡ್ 1387 ಕೋಟಿ ಗಳಿಸಿದ ಆರ್ ಆರ್ ಆರ್ ತಮಿಳಲ್ಲಿ 68.2 ಕೋಟಿ ಗಳಿಸಿತ್ತು.

RRR
ಇವಿಷ್ಟೆ ಅಲ್ಲ ಬಾಹುಬಲಿಯ ಮೂಲಕ ಗ್ಲೋಬಲ್ ಸ್ಟಾರ್ ಆದ ಪ್ರಬಾಸ್ ನಟನೆಯ ಕಲ್ಕಿ ಸಿನಿಮಾ ಮಲ್ಟಿಸ್ಟಾರರ್ ಸಿನಿಮಾ , ಕಮಲ್ ಹಾಸನ್, ಅಮಿತಾಬ್ ಬಚ್ಚನ್ಮ ದೀಪಿಕಾ ಪಡುಕೋಣೆಯಂತಹ ಘಟಾನುಗಟಿ ನಾಯಕ ನಟಿಯರಿದ್ದರೂ ಕೂಡ ತಮಿಳು ನೆಲದಲ್ಲಿ ಗಳಿಸಿದ್ದು ಕೇವಲ 35.30 ಕೋಟಿ ಅಂದ್ರೆ ಅತಿಶಯೋಕ್ತಿಯಲ್ಲ.

ದೀಪಿಕಾ ಪಡುಕೋಣೆ ಏನ್ ಹೇಳಿದ್ರು..?
ಇನ್ನು ತಮಿಳು ನಾಡಿನಲ್ಲಿ ಇತ್ತೀಚಿಗೆ ವಿಜಯ್ ನಟನೆಯ ವಾರಿಸು , ಲಿಯೋ ,ಜೈಲರ್, ಕೂಲಿ ಬಿಟ್ಟರೆ ಇನ್ಯಾವ ಸಿನಿಮಾ ಕೂಡ ಅತಿ ಹೆಚ್ಚು ಕಲೆಕ್ಷನ್ ಮಾಡಿಲ್ಲ. ಕಮಲ್ ಹಾಸನ್ , ಅಜಿತ್ ಸಿನಿಮಾಗಳು ಕೂಡ ನಿರೀಕ್ಷೆಯ ಕಲೆಕ್ಷನ್ ಮಾಡಿಲ್ಲ ಅನ್ನೋದು ವಿಪರ್ಯಾಸ.
ಗೀತಾ ಶ್ರೀ ಹಾಸನ್ ನ್ಯೂಸ್ 18 ಕನ್ನಡ
Bangalore,Karnataka
October 22, 2025 9:06 AM IST



