HS Venkateshamurthy: ಕವಿ, ಸಾಹಿತಿ ಎಚ್‌ ಎಸ್ ವೆಂಕಟೇಶಮೂರ್ತಿ ಇನ್ನಿಲ್ಲ, ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ | Renowned Kannada poet and litterateur HS Venkateshamurthy is no more.

0
32
Advertisement


ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ

ಕವಿ, ನಾಟಕಕಾರ, ವಿಮರ್ಶಕ ಮತ್ತು ಪ್ರಾಧ್ಯಾಪಕರಾಗಿ ಎಚ್. ಎಸ್. ವೆಂಕಟೇಶಮೂರ್ತಿ (HSV) ಕೆಲಸ ಮಾಡಿದ್ದಾರಾ. 1944ರ ಜೂನ್ 23ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ವೆಂಕಟೇಶಮೂರ್ತಿ ಜನಿಸಿದರು. ಅವರ ತಂದೆ ನಾರಾಯಣ ಭಟ್ಟರು ಮತ್ತು ತಾಯಿ ನಾಗರತ್ನಮ್ಮ. ಬಾಲ್ಯದಿಂದಲೂ ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದ್ರು. HSV ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ಇದು ತುಂಬಲಾರದ ನಷ್ಟವಾಗಿದೆ.

ಪ್ರಾಧ್ಯಾಪಕರಾಗಿ ಕೆಲಸ

85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು

ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ 30ಕ್ಕೂ ಹೆಚ್ಚು ವರ್ಷ ಪ್ರಾಧ್ಯಾಪಕರಾಗಿದ್ದರು ಹಾಗೂ ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ಮಾಡಿದ್ರು. ನಿವೃತ್ತಿ ಬಳಿಕ ಬೆಂಗಳೂರಿನಲ್ಲಿ ವಾಸವಾಗಿದ್ರು.

ಸಿನಿಮಾಗೂ ಉತ್ತಮ ಹಾಡು ಕೊಟ್ಟ HSV

ಭಾವಗೀತೆ ಕವಿ ಎಂದೇ ಪ್ರಸಿದ್ಧರಾಗಿದ್ದ HSV ಅವರು ಹಲವು ಜನಪ್ರಿಯ ಸಿನಿಮಾ ಹಾಡುಗಳ ರಚನಾಕಾರರು ಆಗಿದ್ದಾರೆ. ಮಕ್ಕಳಿಗಾಗಿ ಕವಿತೆ, ನಾಟಕ, ಕಥೆಗಳನ್ನೂ ಬರೆದಿದ್ದಾರೆ. ಇವರು ಅನುವಾದಿಸಿದ ಕಾಳಿದಾಸನ ‘ಋತುಸಂಹಾರ‘ ಕಾವ್ಯಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪುರಸ್ಕಾರವನ್ನು ಪಡೆದಿದೆ.

ಕ್ರಿಯಾಪರ್ವ‘, ‘ಎಷ್ಟೊಂದು ಮುಗಿಲು‘, ‘ನದೀತೀರದಲ್ಲಿ‘, ‘ಉತ್ತರಾಯಣ‘ ಮೊದಲಾದವು ಇವರ ಮುಖ್ಯ ಕಾವ್ಯಕೃತಿಗಳು; ‘ಅಗ್ನಿವರ್ಣ’, ‘ಚಿತ್ರಪಟ’, ‘ಉರಿಯ ಉಯ್ಯಾಲೆ‘, ‘ಮಂಥರೆ‘ ಮೊದಲಾದುವು ಇವರ ಮುಖ್ಯ ನಾಟಕಗಳನ್ನು ಬರೆದಿದ್ದಾರೆ.

‘ಈ ಮುಖೇನ‘ ಇವರ ವೈಚಾರಿಕ ಪ್ರಬಂಧಗಳ ಸಂಪುಟ

ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ರಾಜ್ಯೋತ್ಸವ ಪ್ರಶಸ್ತಿ, ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವು ಮುಖ್ಯ ಗೌರವ ಪುರಸ್ಕಾರಗಳನ್ನು ಪಡೆದಿದ್ದಾರೆ. ನ್ಯೂಸ್ 18 ವರ್ಷದ ಕನ್ನಡಿಗ ಪ್ರಶಸ್ತಿ ಪುರಸ್ಕೃತರಾಗಿದ್ದರು.

ಎಚ್. ಎಸ್. ವೆಂಕಟೇಶ ಮೂರ್ತಿ ಮುಖ್ಯ ಕೃತಿಗಳು

ಕವನ ಸಂಕಲನಗಳು

ಸಿಂದಬಾದನ ಆತ್ಮಕಥೆ

ಕ್ರಿಯಾಪರ್ವ

ಒಣಮರದ ಗಿಳಿಗಳು

ಎಷ್ಟೊಂದು ಮುಗಿಲು

ನದೀತೀರದಲ್ಲಿ

ಉತ್ತರಾಯಣ ಮತ್ತು…

ನಾಟಕಗಳು

ಅಗ್ನಿವರ್ಣ

ಚಿತ್ರಪಟ

ಉರಿಯ ಉಯ್ಯಾಲೆ

ಮಂಥರೆ

ಕಂಸಾಯಣ

ಮಕ್ಕಳ ಕೃತಿಗಳು

ಹಕ್ಕಿಸಾಲು

ಅಳಿಲು ರಾಮಾಯಣ

ಅಜ್ಜೀ ಕಥೆ ಹೇಳು

ಚಿನ್ನಾರು ಮುತ್ತ



Source link

LEAVE A REPLY

Please enter your comment!
Please enter your name here

seven − 3 =