Kalburagi Accident: ಭೀಕರ ರಸ್ತೆ ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್​ ಬಿಳಗಿ ಸಾವು | kalburagi Accident ias officer mahantesh Bilagi dies in a horrific road accident | ಕಲ್ಬುರ್ಗಿ

0
12
Advertisement


Last Updated:

ಭೀಕರ ರಸ್ತೆ ಅಪಘಾತದಲ್ಲಿ ಐಎಎಸ್​​ ಅಧಿಕಾರಿ,ಬೆಸ್ಕಾಂ ಎಂ.ಡಿ ಮಹಾಂತೇಶ್​ ಬೀಳಗಿ ಅವರು ಸಾವನ್ನಪ್ಪಿದ್ದಾರೆ.

IAS ಅಧಿಕಾರಿ ಮಹಾಂತೇಶ್​ ಬೀಳಗಿ
IAS ಅಧಿಕಾರಿ ಮಹಾಂತೇಶ್​ ಬೀಳಗಿ

ಕಲಬುರಗಿ: ಭೀಕರ ರಸ್ತೆ ಅಪಘಾತದಲ್ಲಿ ಐಎಎಸ್​​ ಅಧಿಕಾರಿ (IAS Officer) ಮಹಾಂತೇಶ್​  ಬೀಳಗಿ (Mahantesh Bilagi) ಅವರು  ಸಾವನ್ನಪ್ಪಿದ್ದಾರೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಗೌನಹಳ್ಳಿ ಬಳಿ ಘಟನೆ ನಡೆದಿದ್ದು, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಐಎಎಸ್​​ ಅಧಿಕಾರಿ, ಪ್ರಸ್ತುತ ಬೇಸ್ಕಾಂ ಎಂ.ಡಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಹಾಂತೇಶ್​ ಬೀಳಗಿ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಾರೆ. 

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಗೌನಹಳ್ಳಿ ಬಳಿ ಘಟನೆ ನಡೆದಿದ್ದು, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಐಎಎಸ್​​ ಅಧಿಕಾರಿ, ಪ್ರಸ್ತುತ ಬೇಸ್ಕಾಂ ಎಂ.ಡಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಹಾಂತೇಶ್​ ಬೀಳಗಿ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಾರೆ. 

ಮಹಾಂತೇಶ್​ ಬೀಳಗಿ ಅವರು ಇನ್ನೋವಾ ಕಾರಿನಲ್ಲಿ ವಿಜಯಪುರದಿಂದ ಕಲಬುರಗಿಗೆ ಆಗಮಿಸ್ತಿದ್ದ ವೇಳೆ ಎದುರಿಗೆ ಬಂದಿದ್ದ ನಾಯಿಯನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ಕಾರು ಚಾಲಕ ರಾಜು ಮತ್ತು ಈರಣ್ಣಾ ಬೀಳಗಿ ಸ್ಥೀತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಇದನ್ನೂ ಓದಿ: DK Shivakumar: ಡಿಕೆಶಿ ಜೊತೆ ಜಮೀರ್ ಮಾತುಕತೆ! ಕುತೂಹಲ ಮೂಡಿಸಿದ ಸಿದ್ದರಾಮಯ್ಯ ಆಪ್ತ ಸಚಿವನ ನಡೆ

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಾಂತೇಶ ಬೀಳಗಿ ಅವರನ್ನ ತಕ್ಷಣವೇ ಕಲಬುರಗಿ ನಗರದ ಮಣ್ಣೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ದುರಾದೃಷ್ಟವಶಾತ್​ ಚಿಕಿತ್ಸೆ ಫಲಕಾರಿಯಾಗದೆ ಮಹಾಂತೇಶ್​ ಬೀಳಗಿ ಸಾವನ್ನಪ್ಪಿದ್ದಾರೆ. ಇನ್ನು ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ, ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ಮತ್ತು ನಗರ ಪೊಲೀಸ್​ ಆಯುಕ್ತ ಡಾ. ಶರಣಪ್ಪ, ಎಸ್​ಪಿ ಅಡ್ಡೂರು ಶ್ರೀನಿವಾಸುಲು ದೌಡಾಯಿಸಿದರು.

ದಾವಣಗೆರೆ ಜಿಲ್ಲಾಧಿಕಾರಿಯಾಗಿದ್ದ ಮಹಾಂತೇಶ್​ ಬೀಳಗಿ

ಪ್ರಸ್ತುತ ಬೆಸ್ಕಾಂ ಎಂ.ಡಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಹಾಂತೇಶ್​ ಬೀಳಗಿ ಅವರು 2019 ರಿಂದ 2022ರವರೆಗೆ ದಾವಣಗೆರೆ ಜಿಲ್ಲಾಧಿಕಾರಿ ಆಗಿ ಸೇವೆ ಸಲ್ಲಿಸಿದ್ದರು. ಬಳಿಕ ಬೆಸ್ಕಾಂ ಎಂ.ಡಿ ಆಗಿ ನೇಮಕಗೊಂಡಿದ್ದರು.



Source link

LEAVE A REPLY

Please enter your comment!
Please enter your name here

five × 1 =